Sunday, November 7, 2010

ಮೇಕೆದಾಟು-ನಾ ಮರೆಯಲಾಗದ ಒಂದು ಸುಂದರ ಸ್ಥಳ

"ಐದು ದಿನಗಳ ಬಿಡುವಿಲ್ಲದ ಕೆಲಸದ ನಂತರ ಬಂದಿದೆ ಮರುಳುಗಾಡಿನಲ್ಲಿ ನೀರು ಸಿಕ್ಕಂತೆ ಶನಿವಾರ, ಭಾನುವಾರ. ಕೆಲಸದ ಜಂಜಾಟಗಳನ್ನು ಮರೆತು, ಪ್ರಕೃತಿಯೊಡನೆ ಸಮಯ ಕಳೆಯುತ, ನೆಮ್ಮದಿಯನ್ನು, ಸಂತೋಷವನ್ನು ಕಂಡುಕೊಳ್ಳುವ ಆಸೆ. ಮನೆಯಲ್ಲಿ ಎರಡು ದಿನಗಳನ್ನು ಸುಮ್ಮನೆ ಕಳೆಯಲು ಬೇಸರ. ನಾ ಏನು ಮಾಡಲಿ? ಇಂತಹ ಸ್ಥಳವಾದರು ಇರುವುದೆಲ್ಲಿ?" ಇದು ನಿಮ್ಮ ಚಿಂತೆಯಾದರೆ ಇಲ್ಲಿದೆ ಒಂದು ಸುಂದರ, ಮನಸೆಳೆಯುವ ಸ್ಥಳ. ಬೆಂಗಳೂರಿನಿಂದ ಸುಮಾರು ಎಂಬತ್ತು(80) ಕಿಮಿ, ಕನಕಪುರದ ರಸ್ತೆಯಲ್ಲಿ ಸಾಗಿದರೆ ನಮಗೊಂದು ಸ್ಥಳ ಸಿಗುವುದು. ಇದರ ಹೆಸರು ಸಂಗಮ. ಇದು ಹೆಸರೇ ಸೂಚಿಸುವಂತೆ ಕಾವೇರಿ ಹಾಗು ಅರಕಾವತಿ ನದಿಗಳು ಸಂಗಮಿಸುವ ಸ್ಥಳ. ಕಾವೇರಿ ನದಿಯು ಅರಕಾವತಿ ನದಿಯನ್ನು ಕೂಡಿ, ದಕ್ಷಿಣ ದಿಕ್ಕಿಗೆ ರಭಸದಿಂದ ಹರಿಯುತ್ತ, ಗುಡುಗಿನ ಶಬ್ಧವನ್ನು ಸೃಷ್ಠಿಸುತ್ತ ನೇರವಾಗಿ ಹರಿದು ಹೋಗುವ ದೃಶ್ಯವನ್ನು ನೋಡುವುದೇ ಒಂದು ಆನಂದ. ಹಾಗೆ ಹರಿಯುತ್ತ ಹರಿಯುತ್ತ ಒಂದೆಡೆ ಬಂಡೆಗಳ ನಡುವೆ ವೇಗವಾಗಿ ಹರಿದು ಸೃಷ್ಟಿಸಿರುವ ಕಂದಕವೇ ಮೇಕೆದಾಟು. ಈ ಸ್ಥಳದ ಹೆಸರೇ ವಿಚಿತ್ರ. ಮೇಕೆದಾಟೆಂದು ಹೆಸರಿದ್ದರೋ ನಮ್ಮ ಭಾಗದಲ್ಲಿ ಇರುವ ಯಾವ ಮೇಕೆಯು ಆ ಬಂಡೆಗಳನ್ನು ಒಂದೇ ಜಿಗಿತಕ್ಕೆ ದಾಟಿಹೋಗಲಾರವು. ಈ ಹೆಸರಿನ ಪ್ರಾಮುಖ್ಯತೆಯ ಬಗ್ಗೆ ಅಲ್ಲಿಯವರನ್ನು ಕೇಳಿದಾಗ, ಕೆಲವು ವಿಷಯಗಳು ತಿಳಿಯಿತು.


ಕಾವೇರಿ-ಅರಕಾವತಿ ನದಿಗಳು ಸಂಗಮಿಸುವ ಸ್ಥಳ-ಸಂಗಮ

ಈ ಸ್ಥಳಕ್ಕೆ ಮೇಕೆದಾಟೆಂದು ಹೆಸರು ಬರಲು ಕಾರಣ, ಹಿಂದೆ ಅಲ್ಲಿಯ ಕುರೀಕಾಯುವವನೊಬ್ಬ ಬಹಳ ವರುಷಗಳ ಹಿಂದೆ ಕಂಡ ಒಂದು ಘಟನೆಯಿಂದಂತೆ. ಹಿಂದೊಮ್ಮೆ ಒಂದು ದಿನ ಮುಗ್ಧ ಮೇಕೆಯೊಂದನ್ನು ಹಸಿದ ಹುಲಿ ಮಹಾರಾಯನು ಅಟ್ಟಿಸಿಕೊಂಡು ಬರುತ್ತಿತ್ತಂತೆ. ಆಗ ಪ್ರಾಣ ಉಳಿಸಿಕೊಳ್ಳುವ ಪರಿಯಲ್ಲಿ ಆ ಮೇಕೆಯು ಬಂಡೆಗಳ ನಡುವೆ ರಭಸದಿಂದ ಹರಿಯುತ್ತಿದ್ದ ನದಿಯನ್ನು ಒಂದೇ ಜಿಗಿತದಲ್ಲಿ ಹಾರಿಬಿಟ್ಟಿತ್ತಂತೆ. ಆದರೆ ಹುಲಿರಾಯನು ಮೇಕೆ ಹಾರಿದ್ದನ್ನು ಕಂಡರೂ ಕೂಡ ಆ ಸಾಹಸಕ್ಕೆ ಮನಸ್ಸು ಮಾಡದೆ, ಮೇಕೆಯನ್ನು ಹಿಂಬಾಲಿಸುವ ಕಾರ್ಯವನ್ನೇ ನಿಲ್ಲಿಸಿ ಹಸಿದ ಹೊಟ್ಟೆಯಲ್ಲೇ ಹಿಂತಿರುಗಿ ಹೋಯಿಯಂತೆ. ಮೇಕೆ ಹಾರಿದ ಆ ಜಾಗ, ಕಾವೇರಿ ನದಿಯು ಹರಿಯುವಿಕೆ ಇಂದ ಮಣ್ಣು ಸವಳಿಕೆಯಾಗಿ ಈಗ ಸ್ವಲ್ಪ ಅಗಲವಾಗಿಬಿಟ್ಟಿದೆ.


ನಿನ್ನ ಕೈಲಾದರೆ ನನ್ನ ಹಿಡಿ ನೋಡುವ!!!


ಈ ಸ್ಥಳಕ್ಕೆ ಪೌರಾಣಿಕ ಹಿನ್ನಲ್ಲೆಯೂ ಇದೆ. ಒಂದು ಕಥೆಯ ಪ್ರಕಾರ ಕಾವೇರಿ ನದಿಯನ್ನು ದಾಟಿದ ಮೇಕೆ ವೇಷಮರಿಸಿಕೊಂಡಿದ್ದ ಪರಮಾತ್ಮ ಶಿವನಂತೆ. ನದಿಯ ಎರಡು ಬದಿಯಲ್ಲೂ ದೊಡ್ಡ ದೊಡ್ಡ ಬಂಡೆಗಳಿವೆ. ಅದರ ಮೇಲೆ ವಿಚಿತ್ರವಾದ ರಂದ್ರಗಳನ್ನು ಕಾಣಬಹುದು. ಅವುಗಳ ಗಾತ್ರ ದೊಡ್ಡದಾದರೂ, ಅವೆಲ್ಲವು ಮೇಕೆಯ ಪಾದದ ಗುರುತುಗಳಂತೆ ಕಾಣುತ್ತವೆ. ಪ್ರಾಯಶಃ ಮೇಕೆಯಂತೆ ವೇಷಮರಿಸಿಕೊಂಡಿದ್ದ ಶಿವನು ಆ ಬೃಹತ್ತಾದ ಬಂಡೆಗಳ ಮೇಲೆ ಈ ರೀತಿ ಮಾಡಿದ್ದನೇನೋ.


ಜೀವನದಲ್ಲಿ ಏಳೂ-ಬೀಳು ಸಹಜ!!!

ಈ ಸ್ಥಳಕ್ಕೆ ತಲುಪಬೇಕೆಂದರೆ ಬೆಂಗಳೂರಿನಿಂದ ಕನಕಪುರ ರಸ್ತೆಯಲ್ಲಿ ನೇರವಾಗಿ ಸಾಗಬೇಕು. ಕನಕಪುರ ತಲುಪಿದ ನಂತರ ಎಡಕ್ಕೆ ತಿರುಗಿದರೆ ನೇರ ರಸ್ತೆ. ಪ್ರಯಾಣದ ಉದ್ದಕ್ಕೂ ಹಸಿರಿನಿಂದ ಕಂಗೊಳೆಸುವ ಹೊಲಗದ್ದೆಗಳು, ಬಣ್ಣ ಬಣ್ಣದ ಹೂ ತೋಟಗಳು ನಿಮ್ಮ ಗಮನಸೆಳೆಯುತ್ತವೆ. ಈ ಪ್ರದೇಶದಲ್ಲಿ ರೇಷ್ಮೆ ಉತ್ಪನ್ನಕ್ಕು ಹೆಚ್ಚಿನ ಒತ್ತು ನೀಡಲಾಗುತ್ತದೆ. ಹೀಗೆ ಪ್ರಕೃತಿಯ ನಡುವೆ ಸಾಗುತ್ತ ಬಂದರೆ ಎರಡು ತಾಸಿನಲ್ಲಿ ಸಂಗಮ ತಲುಪಬಹುದು. ಬಸ್ಸಿನಲ್ಲಿ ಬರಬೇಕೆಂದರೆ ಬೆಂಗಳೂರಿನ ಬನಶಂಕರಿಯಿಂದ ಕನಕಪುರಕ್ಕೆ ಬಂದು, ಕನಕಪುರದಿಂದ ಸಂಗಮಕ್ಕೆ ನಿರಾಯಾಸವಾಗಿ ಸೇರಬಹುದು. ಸಂಗಮದಲ್ಲಿ ಶಾಂತವಾಗಿ ವಿರಮಿಸುವ ಅರಕಾವತಿ ನದಿಯನ್ನು ಶ್ರಮವಿಲ್ಲದೆ ಕಾಲುದಾರಿಯಲ್ಲೇ ದಾಟಬಹುದು. ಮಳೆಗಾಲದಲ್ಲಿ ಮಾತ್ರ ದಾಟಲು ಕಷ್ಟವಾದ್ದರಿಂದ ಅಲ್ಲಿರುವ ತೆಪ್ಪದ ಸೌಲಭ್ಯವನ್ನು ಉಪಯೊಗಿಸಿಕೊಳ್ಳಬಹುದು. ಹದಿನೈದು ನಿಮಿಷದ ತೆಪ್ಪದ ಪಯಣದ ನಂತರ ಅಚ್ಚರಿ ಮೂಡಿಸುವ ಬಸ್ಸೊಂದು ನಿಮ್ಮ ಕಣ್ಣನ್ನು ಸೆಳೆಯುವುದು. ಅದರಲ್ಲಿ ಕುಳಿತರೆ ಹತ್ತೇ ನಿಮಿಷದಲ್ಲಿ ಮೇಕೆದಾಟನ್ನು ಸೇರಬಹುದು. ಆ ಹತ್ತು ನಿಮಿಷದ ಪಯಣ ಸ್ವಲ್ಪ ಕಷ್ಟವಾದರು, ಅದೊಂದು ಮರೆಯಲಾಗದ ಅನುಭವ. ಕೆಲವೊಮ್ಮೆ ಆಯಾಸದಲ್ಲು ಸುಖವಿರುತ್ತಂತೆ, ಈ ಬಸ್ಸಿನ ಪ್ರಯಾಣವನ್ನು ಮಾಡೇ ಹೇಳಿದ್ದರೇನೊ ಹಿರಿಯರು. ಆ ಜಾಗಕ್ಕೆ ತಲುಪಿದ ನಂತರ ಕಲ್ಲು ಬಂಡೆಗಳ ನಡುವೆ ಸ್ವಲ್ಪದೂರ ನಡೆದರೆ ಎಂದೂ ಊಹಿಸಲಾಗದ ಸುಂದರ ದೃಶ್ಯವೊಂದನ್ನು ನೀವು ಕಾಣಬಹುದು. ನನಗಂತೂ ಅದೊಂದು ಮರೆಯಲಾಗದ ಅನುಭವ. ದೇವರು ಸ್ರುಷ್ಟಿಸಿರುವ ಆ ಬಣ್ಣ ಬಣ್ಣದ ಚಿತ್ರವನ್ನು ವೀಕ್ಷಿಸಿ, ಅವನಿಗೊಂದು ನಮನ ಹೇಳದೆ ನೀವು ನಿಲ್ಲರಾರಿರಿ.


ನಾನೇ ತೆಪ್ಪದ ರಾಜಕುಮಾರ


ಮೇಕೆದಾಟುವಿನ ಒಂದು ರಮಣೀಯ ನೋಟ


ಬಸ್ಸು ಬಸ್ಸು ಬಸ್ಸು ಡಕೊಟ ಎಕ್ಸಪ್ರೆಸ್ ಬಸ್ಸು-ನಮ್ಮನ್ನು ಸಂಗಮದಿಂದ ಮೇಕೆದಾಟುವಿಗೆ ಕೊಂಡೊಯ್ದ ವಾಹನ

ಈ ಸುಂದರ ಪ್ರದೇಶದಲ್ಲಿ ಎಷ್ಟು ಹೊತ್ತಾದರೂ ಸಮಯ ಕಳೆಯಬಹುದು. ಆದರೆ ಒಂದು ತಪ್ಪು ಹೆಜ್ಜೆ ಇಟ್ಟಿರೋ, ಅಪಾಯ ಖಂಡಿತ. ಅಷ್ಟೊಂದು ರಭಸದಿಂದ ನೀರು ಹರಿಯುವ ಸ್ಠಳ ಮೇಕೆದಾಟು. ಅನೇಕ ಮಂದಿ ಅತೀ ಉತ್ಸುಕರಾಗಿ ಇಲ್ಲಿ ತಮ್ಮ ಪ್ರಾಣ ಕಳೆದುಕೊಂಡ್ದಿದ್ದಾರೆ. ನಾವು ಸದಾ ಪ್ರಕೃತಿಯನ್ನು ಹೇಗಿದೆಯೋ ಹಾಗೆ ನೊಡಿ ಆನಂದಿಸಬೇಕೇ ಹೊರತು ಅದರ ವಿರುದ್ದ ಹೋಗಲು ಪ್ರಯತ್ನಿಸಬಾರದು. ಇಂತಹಾ ಒಂದು ಸುಂದರ, ಮನಮೋಹಕ ಸ್ಥಳದಲ್ಲಿ ಸಮಯ ಕಳೆದ ಕ್ಷಣಗಳನ್ನು ನಾನಂತೂ ಮರೆಯಲಾರೆ. ಮೇಕೆದಾಟಿನ ನೆನಪುಗಳು ನನ್ನ ಮನದಲ್ಲಿ ಭದ್ರವಾಗಿ ನೆಲೆಸಿಬಿಟ್ಟಿವೆ. ನೀವ್ಯಾರಿಗಾಗಿ ಕಾಯುತ್ತಿರುವಿರಿ, ಈ ವಾರವೇ ಮೇಕೆದಾಟಿಗೆ ಹೋಗಿ ಬನ್ನಿ. ಸುಂದರ ಪ್ರಕೃತಿಯ ವಿಶೇಷತೆಗಳ ಅನುಭವವನ್ನು ಸವಿದು ಬನ್ನಿ. ನಿಮ್ಮ ಪ್ರಯಾಣ ಸುಖವಾಗಿರಲಿ.


ರಭಸದಿಂದ ಹರಿಯುತ್ತಿರುವ ಕಾವೇರಿ ನದಿ


ಸಹಾಯ ಬೇಡಿ ಬಂದ ಅಜ್ಜಿ

Friday, November 5, 2010

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು:):)
ಮರುಕಳಿಸಿದೆ ಸಂಭ್ರಮದ ದೀಪಾವಳಿ
ಪ್ರತಿ ರಸ್ತೆಯಲ್ಲಿ ಪಟಾಕಿಗಳ ನಿಲ್ಲದ ಹಾವಳಿ
ಎಲ್ಲಿ ನೋಡಿದರೂ ಬೆಳಗುವ ದೀಪಗಳದೇ ಧಾಳಿ
ಪ್ರತಿಯೊಬ್ಬರ ಮನೆಯೂ ಆಗಿರುವುದು ಒಂದೊಂದು ಖಾನಾವಳಿ
ಖರ್ಚುಗಳಿಂದಾಗಿರುವುದು ನಮ್ಮೆಲ್ಲರ ಜೇಬು ಖಾಲಿ ಖಾಲಿ.....

ನಿಮಗೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳುThursday, November 4, 2010

CLIFE!!!!!!
This was my entry into the See Life through the Lens competition organised by Infosys HRD. The theme of this is to show the values that we follow at Infosys. CLIFE means
customer focus, leadership by example, integrity and transparency, fairness and excellence in execution, to achieve its goals. They wanted us to click something special which fits well for any one of these values. I tried my hand in clicking something. The picture according to me depicts the Values Leadership Quality and also Integrity and transparency showed by a cute, innocent kid.
Last week I was enjoying the weekend in Bannergatta National Park. I was completely involved in clicking some snaps of the caged animals. At that time I became a part of few people who witnessed an interesting incident. As usual people were putting some coins in the Elephant's trunk. Elephant was politely accepting the amount and it was acknowledging everyone by putting its trunk on top of the donor. But at that time there were quite a few number of kids who were watching that act and they were enjoying the show. But none of them came forward to keep the coin in the elephant’s trunk. By seeing their faces I was sure that they all were scared after seeing that animal. This went on for sometime and finally I saw a brave, innocent boy, who might be around eight or nine years old coming forward with a two rupee coin. He with complete calmness came near the Elephant, kept the coin in Elephant’s trunk without any fear, elephant as usual acknowledged in its style and he went back near his mother jumping joyfully with a unexplainable satisfaction. After seeing that kid, many kids started doing the same and it was a complete fun for the kids after that. They walked to and fro with some coins and they all enjoyed with their new, silent, innocent friend. After witnessing that I realized how that small kid showed his Leadership quality at such a young age. By going first he showed the way to other kids. Leading the way with courage is what Leadership is all about. He also showed one more value at the same moment that is the Integrity and transparency by trusting the monster and respecting his inner voice. His action indicated the trust he had on that big animal and his willingness to share something with the unknown. Finally after witnessing that kid’s act I learnt the fact that “In any relationship, the essence of trust is not in its bind, but in its bond”.

ಜಾಕಿ ಚಿತ್ರದ "ಶಿವಾ ಅಂತ ಹೊಗುತ್ತಿದ್ದೆ" ಹಾಡನು ನಾ ಬರೆದ್ದಿದ್ದರೆ ಹೀಗಿರುತ್ತಿತ್ತೇನೋ!!!!

ಚಲನಚಿತ್ರದ ಹಾಡಿನ ಸಾಲುಗಳನು ನಮಗೆ ಬೇಕಾದಹಾಗೆ ಬಳಸಿಕೊಳ್ಳಬಾರದು. ಆದರು ಈ ಹಾಡನು ನನ್ನ ಸ್ನೇಹಿತನ ಜೀವನದಲ್ಲಿ ನಡೆದ ಒಂದು ಘಟನೆಗೆ ಹೋಲಿಸಿ ಬರೆಯಬೇಕೆನ್ನಿಸುತ್ತಿತ್ತು. ಪ್ರಯತ್ನಪಟ್ಟಿರುವೆ.

ಶಿವ ಅಂತ ಓದುತ್ತಿದ್ದೆ ಕಾರಿಡಾರಲ್ಲಿ
ಸಿಕ್ಕಾಪಟ್ಟೆ ಒದ್ಬಿಟ್ಟಿದ್ದೆ ರಾತ್ರಿಯಲ್ಲಿ
ನೂರಕ್ ನೂರು ತೆಗೀಬೇಕಂತ್ತಿದ್ದೆ ಜೊಶಿನಲ್ಲಿ
ಅವಳ್ ಸೀಟಿತ್ತು ನನ್ ಪಕ್ಕದಲ್ಲಿ

ನಂಬರ್ ನೋಡಿ ಕಳದೇ ಹೋದೆ ಖುಷಿಯಲ್ಲಿ
ಓದಿದ್ದೆಲ್ಲ ತೇಲಿ ಹೋಯ್ತು ಗಾಳಿಯಲ್ಲಿ
ಯಾವಾಗ್ ಬರ್ತಾಳಂತ ಕಾಯುತ್ತಿದ್ದೆ ಆಸೆಯಲ್ಲಿ
ಕಾಣಿಸೇ ಬಿಟ್ಲು ಸೀರೆಯಲ್ಲಿ... ಸೀರೆಯಲ್ಲಿ.. ಸೀರೆಯಲ್ಲಿ.. ಸೀರೆಯಲ್ಲಿ


ಬೆಲ್ ಹೊಡ್ದಿದ್ದು, ಗೊತ್ತಾಗ್ಲಿಲ್ಲ
ಕ್ವಷನ್ ಪೇಪರ್ ಓದ್ಲೇ ಇಲ್ಲ

ಬೆಲ್ ಹೊಡ್ದಿದ್ದು ಗೊತ್ತಾಗ್ಲಿಲ್ಲ, ಕ್ವಷನ್ ಪೇಪರ್ ಓದ್ಲೇ ಇಲ್ಲ

ಯಾವ ಕ್ವಷನ್ ಬರೆಯೊದಂತ ತಿಳಿಲೇ ಇಲ್ಲ
ಅವಳನ್ನೇ ನೋಡ್ತ ನೋಡ್ತ ಕುಂತುಬಿಟ್ಟೆನಲ್ಲ

ಒಂದೂ ಉತ್ರ, ಹೊಳೀಲಿಲ್ಲ
ಒಂದೂ ಉತ್ರ ಹೊಳೀಲಿಲ್ಲ, ಅವಳೇ ಮನಸಲ್ ಕುಂತಿದ್ಲಲ್ಲ

ನನ್ನ ಮಂಯ್ಡನ್ನು ಡೈವರ್ಟ ಮಾಡಿಸ್ಬಿಟ್ಲು,
ಯಗ್ಸಾಮ್ ಹಾಲಲ್ಲೇ ಕನಸು ಕಾಣೊ ಹಾಗೆ ಮಾಡೇಬಿಟ್ಲು

ತುಂಬ ಚೆನ್ನಾಗ್ ಓದ್ತಾ ಇದ್ದೆ ಕಾಲ್ಲೆಜ್ ನಲ್ಲಿ
ಹೈಯಸ್ಟ ಮಾರ್ಕ್ಸು ತೆಗಿತಿದ್ದೆ ಇಂಟರ್ನಲ್ಸಲ್ಲಿ

ಹುಡುಗೀರ್ ಸಹವಾಸ ಬೇಕ ಗುರು??? ಬೇಕು ಗುರು.. ಬೇಕು ಗುರು.. ಬೇಕು ಗುರು.


ಶಿವ ಅಂತ ಓದುತ್ತಿದ್ದೆ ಕಾರಿಡಾರಲ್ಲಿ
ಸಿಕ್ಕಾಪಟ್ಟೆ ಒದ್ಬಿಟ್ಟಿದ್ದೆ ರಾತ್ರಿಯಲ್ಲಿ
ನೂರಕ್ ನೂರು ತೆಗಿಬೇಕಂತ್ತಿದ್ದೆ ಜೊಶಿನಲ್ಲಿ
ಅವಳ್ ಸೀಟಿತ್ತು ನನ್ ಪಕ್ಕದಲ್ಲಿಅವಳು ಜೋರಾಗ್ ಬರೀತಿದ್ಲು
ನನ್ನ ಜೀವ್ನ ಹಾಳಾಗ್ತಿತ್ತು
ಅವಳು ಜೋರಾಗ್ ಬರೀತಿದ್ಲು, ನನ್ನ ಜೀವ್ನ ಹಾಳಾಗ್ತಿತ್ತು

ಕುಂತು ಬಿಟ್ಲು ಪಕ್ಕದ ಸೀಟಿನಲ್ಲಿ
ನಾನ್ ಚುಚ್ಕೊಬೇಕು ನನ್ನದೆ ಪೆನ್ನಿನಲ್ಲಿ

ಕ್ಯಾಂಪಸ್ ಸೆಲೆಕ್ಷನ್ ಆಗ್ಬೇಕಂದ್ರೆ,
ಕ್ಯಾಂಪಸ್ ಸೆಲೆಕ್ಷನ್ ಆಗ್ಬೇಕಂದ್ರೆ, 70 ಪರ್ಸೆಂಟ್ ಬರ್ಲೇ ಬೇಕು

ಸುಮ್ನೆ ಅವಳ್ನ ನೊಡ್ತ ಹೇಗೆ ಕೂತುಬಿಡ್ಲಿ
ಫೇಲ್ ಆದರೆ ಮುಖವನ್ನು ಹೇಗೆ ತೋರುಸ್ಲಿ

ನಾಚಿಕೆ ಇಲ್ದೆ ಆನ್ಸರ್ ಪೇಪರ್ ಕೊಡು ಅಂತ ಕೇಳೆ ಬಿಟ್ಟೆ
ನಾಚಿಕೆ ಇಲ್ದೆ ಆನ್ಸರ್ ಪೇಪರ್ ಕೊಡು ಅಂತ ಕೇಳೆ ಬಿಟ್ಟೆ

ಕಾಪಿ ಹೊಡ್ದಿದ್ ಸರೀನ ಗುರು??. ಸರಿನೇ ಗುರು.. ಸರಿನೇ ಗುರು.. ಸರಿನೇ ಗುರು


ಶಿವ ಅಂತ ಓದುತ್ತಿದ್ದೆ ಕಾರಿಡಾರಲ್ಲಿ
ಸಿಕ್ಕಾಪಟ್ಟೆ ಒದ್ಬಿಟ್ಟಿದ್ದೆ ರಾತ್ರಿಯಲ್ಲಿ
ನೂರಕ್ ನೂರು ತೆಗಿಬೇಕಂತ್ತಿದ್ದೆ ಜೊಶಿನಲ್ಲಿ
ಅವಳ್ ಸೀಟಿತ್ತು ನನ್ ಪಕ್ಕದಲ್ಲಿ

ನಂಬರ್ ನೋಡಿ ಕಳದೇ ಹೋದೆ ಖುಷಿಯಲ್ಲಿ
ಓದಿದ್ದೆಲ್ಲ ತೇಲಿ ಹೋಯ್ತು ಗಾಳಿಯಲ್ಲಿ
ಯಾವಾಗ್ ಬರ್ತಾಳಂತ ಕಾಯುತ್ತಿದ್ದೆ ಆಸೆಯಲ್ಲಿ
ಕಾಣಿಸೇ ಬಿಟ್ಲು ಸೀರೆಯಲ್ಲಿ.

ಕನ್ನಡ-ಕನ್ನಡಿಗ-ಕರ್ನಾಟಕದ ಬೆಳವಣಿಗೆಯಲ್ಲಿ ನಮ್ಮ ಪಾತ್ರ ಮತ್ತು ಕರ್ತವ್ಯ

ಭವ್ಯ ಭಾರತದ ವಿಶಾಲ ನಕ್ಷೆಯಲಿ ದಕ್ಷಿಣ ಪ್ರಾಂತ್ಯದ ಮದ್ಯದಲ್ಲಿ ಬರುವ ಪ್ರದೇಶವೇ ನಮ್ಮ ಕರುನಾಡು. ಹಸಿರು ವನಗಳ, ಮನಸೆಳೆಯುವ ಬೆಟ್ಟ ಗುಡ್ಡಗಳ, ಶಾಂತಿಯಿಂದ ಹರಿಯುವ ಸುಂದರ ನದಿಗಳ, ಪ್ರಸಿದ್ದ ಐತಿಹಾಸಿಕ ದೇವಾಲಯಗಳ, ಮನಮೊಹಕ ಸಮುದ್ರಗಳ ಸುಂದರ ನಾಡು. ಅವಕಾಶಗಳು ಕೈಬೀಸಿ ಕರೆಯುವ ಸಿರಿಗಂಧದ ಬೀಡು. ಸುಂದರ ವಾತಾವರಣ, ಎಲ್ಲರನು ಆಹ್ವಾನಿಸಿ, ಅವರಿಗನುಗುಣವಾಗಿ ಜೀವನ ಸಾಗಿಸುವ ಹೃದಯವಂತ ಜೀವಿಗಳು. ಸಾಹಿತ್ಯದಲ್ಲಿ ಅತೀ ಹೆಚ್ಚು ಜ್ನಾನಪೀಠ ಪ್ರಶಸ್ತಿಗಳನ್ನು ಗಳಿಸಿರುವ ಹೆಗ್ಗಳಿಕೆ ನಮ್ಮ ನಾಡಿಗೆ ಸೆರಿದ್ದಾಗಿದೆ. ಕಾವೆರಿಯಿಂದಿಡಿದು ಗೋದಾವರಿಯವರೆಗು ಹಬ್ಬಿರುವ ಪ್ರಾಂತ್ಯ ನಮ್ಮದು. ಇಂತಹ ಸುಂದರ ನಾಡಿನಲ್ಲಿ ಹುಟ್ಟಿರುವ ನಾವೆಲ್ಲಾ ಒಂದು ರೀತಿಯಲ್ಲಿ ಧನ್ಯರೇ ಸರಿ. ಕರುನಾಡಿನಲ್ಲಿ ಹುಟ್ಟಿ, ಶಾಸ್ತ್ರೀಯ ಭಾಷೆಯಾದ ಕನ್ನಡವನು ತಮ್ಮ ಮಾತೃಭಾಷೆಯನ್ನಾಗಿಸಿಕೊಂಡಿರುವವರೆಲ್ಲ ಕನ್ನಡಿಗರು. ಭಾಷೆಯು ಸದಾ ಒಂದು ನಾಡಿನ ಸಂಸ್ಕೃತಿಯ ಪ್ರತೀಕ. ಆದರೆ ಕನ್ನಡಿಗರ ಅತೀ ಹೃದಯ ವಿಶಾಲತೆಯಿಂದ ಕನ್ನಡ ನಾಡಿನಲ್ಲಿ ಕನ್ನಡವೇ ನಶೀಸಿಹೊಗಬಹುದಾದಂತಹ ಕಾಲ ಬಂದಿದೆ. ಇದಕ್ಕೆ ಕಾರಣ ಪರಭಾಷೆಯ ಮೇಲಿರುವ ವ್ಯಾಮೋಹವೋ ಅಥವಾ ಕನ್ನಡ ಬಗ್ಗೆ ಇರುವ ಅಸಡ್ಡೆಯೋ ಆ ದೇವರೇ ಬಲ್ಲ. ಇದನೆನೆಯುತ್ತಿದ್ದರೆ ಒಂದು ಸಣ್ಣ ಕಥೆಯ ನೆನಪಾಗುತ್ತದೆ.

ಅಂದೊಂದು ದಿನ ನನ್ನ ಸ್ನೇಹಿತನ ಮನೆಯಲ್ಲಿ ಸತ್ಯನಾರಾಯಣ ಪೂಜೆ. ಅವರ ಮನೆಯವರೆಲ್ಲ ಭಕ್ತಿಭಾವಗಳಿಂದ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಿದ್ದರು. ವ್ರುದ್ದರೆಲ್ಲರು ಹೆಳೆಯ ನೆನಪುಗಳನ್ನು ಉತ್ಸಾಹ, ಹರುಷದಿಂದ ಹಂಚಿಕೊಳ್ಳುತ್ತಿದ್ದರು. ಎಲ್ಲಿ ನೋಡಿದರೂ ಪುಟಾಣಿ ಮಕ್ಕಳ ಮುಗ್ಧ ನಗೆಯ ಸದ್ದು, ಅವರ ವಿಚಿತ್ರ ನಮಗರಿಯದ ಕಾಲ್ಪನಿಕ ಆಟಗಳು. ಒಟ್ಟಿನಲ್ಲಿ ಅಲ್ಲಿ ಸೃಷ್ಟಿಯಾಗಿದ್ದ ವಾತಾವರಣವೇ ವಿಶೇಷವಾಗಿತ್ತು. ಇವೆಲ್ಲದರ ನಡುವೆ ಯಾವುದೋ ಮೂಲೆಯಿಂದ ಮಗುವೊಂದು ಅಳುವ ಶಬ್ಧ ಕೇಳಿಬಂತು. ನಾನು ನನ್ನ ಸ್ನೇಹಿತರು ಅಲ್ಲಿಗೆ ಹೊಗಿ ನೋಡಿದಾಗ ತಾಯಿಯೊಬ್ಬಳು ತನ್ನ ಮಗನಿಗೆ ಥಳಿಸುತ್ತಿದ್ದ ದೃಶ್ಯವನ್ನು ಕಂಡೆವು. ಸ್ನೇಹಿತೆಯೊಬ್ಬಳು ತಾಯಿಯ ಬಳಿಹೋಗಿ " ಅಮ್ಮ ನೀವೇಕೆ ಪುಟ್ಟು ಕಂದನನ್ನು ಹೀಗೆ ಥಳಿಸುತ್ತಿರುವಿರಿ?" ಎಂದು ಕೇಳಿದಾಗ ಆ ತಾಯಿ ಉತ್ತರಿಸಿದ್ದು ಹೀಗೆ " Who the hell are you? Please mind your own buisiness". ಅದನು ಕೇಳಿ ನಮಗೆಲ್ಲ ಒಂದು ರೀತಿ ಗರಬಡಿದಂತೆ ಆಯಿತು. ಒಬ್ಬರೊಬ್ಬರ ಮೊಗವನು ಒಬ್ಬರು ನೋಡುತ್ತ ನಿಶಬ್ಧವಾಗಿ ಎಲ್ಲರೂ ನಿಂತುಬಿಟ್ಟೆವು. ಹರುಷದಿಂದ ಭೀಗುತ್ತಿದ್ದ ಎಲ್ಲರ ಮೊಗವೂ ಕಳಹೀನವಾಯಿತು. ಅದೇ ಸಮಯದಲ್ಲಿ ಆ ಮಗುವಿನ ತಂದೆ ಅಲ್ಲಿಗೆ ಬಂದು ಅವರ ಶ್ರೀಮತಿಯ ಬಳಿ ಹೋಗಿ "ಏನ್ ಆಯಿತು?" ಎಂದು ಕೇಳಿದರು. ಆಕೆ ನೀಡಿದ ಉತ್ತರ ಕೇಳಿ ನಮಗೆಲ್ಲ ಒಂದು ನಿಮಿಷ ಯಾವ ಮಾತೂ ಹೊರಡಲಿಲ್ಲ. ಆಕೆಯ ಉತ್ತರ " I asked him to talk in English with his friends. But this idiot is talking in kannada with all of them. What should i do??" ಈ ರೀತಿಯ ಮಾತನು ಮೊದಲ ಬಾರಿ ಕೇಳಿದ ನನ್ನ ಮನದಲ್ಲಿ ಹುಟ್ಟಿದ ಆಕೆಯ ಮಾತಿಗೆ ವಿರುದ್ದದ ಮಾತುಗಳು ನೂರಾರು ಆದರೆ ಅದ್ಯಾಕೋ ಕಾಣೆ ತುಟಿಯಿಂದ ಒಂದು ಮಾತು ಹೊರಡಲಿಲ್ಲ. ಧೈರ್ಯ ಕಮ್ಮಿಯಾಗಿತ್ತೊ ಅಥವಾ ಆಕೆಯ ಹುಚ್ಚುತನಕ್ಕೆ ಉತ್ತರ ನೀಡಲು ಇಷ್ಟವಾಗಲಿಲ್ಲವೋ, ಅಲ್ಲಿಂದ ಹೊರಟೇಬಿಟ್ಟೆ.

ಮನೆಗೆ ಹಿಂದಿರುಗಿದ ಮೇಲೆ ಬರೀ ಆ ಪುಟ್ಟ ಕಂದನ ಅಳುವಿನ ಸದ್ದೇ ಮನದಲ್ಲಿ ಗುಣುಗುತ್ತಿತ್ತು. ಅವನು ಇನ್ನು ಪುಟ್ಟ ಹುಡುಗ, ಅಲ್ಲದೆ ಅವನ ಸ್ನೇಹಿತರೊಡನೆ ಅದೂ ಕರ್ನಾಟಕದಲ್ಲಿ ಕನ್ನಡ ಮಾತನಾಡಿದರೆ ತಪ್ಪೇನು? ಆ ತಾಯಿಗೆ ಕನ್ನಡದ ಬಗ್ಗೆ ಅಷ್ಟೆಕೆ ಅಸಡ್ಡೆ? ಹಾಗಾದಾಗ ನನ್ನನೂ ಸೇರಿ ಎಲ್ಲರು ಮೌನ ತಾಳಿದ್ದೆಕೆ? ಬರೀ ಈ ರೀತಿಯ ಪ್ರಶ್ನೆಗಳೇ. ಈ ರೀತಿಯ ಆಂಗ್ಲ ವ್ಯಾಮೊಹ ನಮಗೆ ಬೇಕಾ? ಕನ್ನಡದಲ್ಲಿರದ, ಆಂಗ್ಲದಲ್ಲಿರುವ ಆ ಅಂಶವೇನು? ಬಸ್ಸಿನಲ್ಲಿ ಹೋಗುವಾಗ ಬಾಲಕರು ಮಾತನಾಡುವ ಭಾಷೆ ಆಂಗ್ಲ. ತಾಯಿ ತನ್ನ ಮಕ್ಕಳೊಡನೆ ಸಂಭಾಷಿಸುವ ಭಾಷೆ ಆಂಗ್ಲ. ಆಂಗ್ಲ ಬೇರೆ ನಾಡು ಅಥವ ಬೇರೆ ರಾಷ್ಟ್ರದವರೊಡನೆ ಮಾತನಾಡಲು ಬೇಕೇ ಬೇಕಾದ ಭಾಷೆ, ಇದನು ನಾನು ಒಪ್ಪುವೆ. ಆದರೆ ಆ ಪುಟ್ಟ ಕಂದನೇಕೆ ಸ್ನೇಹಿತರೊಡನೆ ಆ ಸಣ್ಣ ವಯಸ್ಸಿನಲ್ಲಿ ಆಂಗ್ಲ ಭಾಷೆಯಲ್ಲಿ ಮಾತನಾಡಬೇಕು? ಸಮಯ ಹೋದಂತೆ ಅದು ಹಾಗೆ ಬರುವುದಿಲ್ಲವೆ? ಹೀಗೆ ಯೋಚಿಸುತ ಇಡೀ ರಾತ್ರಿ ಕಳೆದು ಹೋಯಿತು. ಆದರೆ ಉಧ್ಭವಿಸಿದ ಪ್ರಶ್ನೆಗಳಿಗೆ ಮಾತ್ರ ಉತ್ತರ ದೊರಕಲಿಲ್ಲ.

ಹೊಯ್ಸಳರು, ಕದಂಬರು, ಶಾತವಾಹನರು ಆಳ್ವಿಕೆ ನಡೆಸಿದ ನಾಡು ನಮ್ಮದು. ಕನ್ನಡ ಭಾಷೆಯ, ಕನ್ನಡ ನಾಡಿನ ಉಳಿವಿಕೆ, ಬೆಳವಣಿಗೆಗಾಗಿ ಹಲವಾರು ಸಂಸ್ಥೆಗಳು, ಪ್ರಾಧಿಕಾರಗಳು ಹಗಲೂ ರಾತ್ರಿ ಶ್ರಮಪಡುತ್ತಿವೆ. ಹಲವಾರು ಗಣ್ಯರು ತಮ್ಮ ಜೀವನವನ್ನೆ ಕನ್ನಡ ನಾಡಿಗಾಗಿ ಮುಡಿಪಾಗಿಟ್ಟಿದ್ದಾರೆ. ನಮ್ಮ ಭಾಷೆಗೆ ನೀಡುವ ಗೌರವವೇ ನಾವವರಿಗೆ ಮಡಬಹುದಾದ ಸಹಾಯ. ಬಹುಶಃ ನಾಡ ಭಾಷೆಗಾಗಿ ಇಷ್ಟೊಂದು ಚಳುವಳಿಗಳು ಬೆರೆ ಯಾವ ನಾಡಿನಲ್ಲು ನಡೆದಿಲ್ಲ. ಅವರವರ ಭಾಷೆಗೆ ಅಲ್ಲಿನ ಜನರೇ ಸಹಜವಾಗಿ ಗೌರವದಿಂದ , ಅಭಿಮಾನದಿಂದ ಸಲ್ಲಿಸಬೇಕಾದ ನ್ಯಾಯ ಸಲ್ಲಿಸುತ್ತಿದ್ದಾರೆ. ಪರಭಾಷೆಗಳನು ಗೌರವಿಸಿ, ಆದರೆ ನಮ್ಮ ಮಾತ್ರುಭಾಷೆಯನು ಮಾತ್ರ ಎಂದೂ ನಿಂದಿಸ ಬೇಡಿ. ಪರಭಾಷ ಚಿತ್ರಗಳನು ನೋಡಿ, ಆದರೆ ಕನ್ನಡ ಚಿತ್ರಗಳನು ವೀಕ್ಷಿಸದೆ, ತ್ಯಗಳುತ್ತಿರಬೇಡಿ. ಕನ್ನಡ ನಾಡಿನಲ್ಲಿ ಕನ್ನಡ ಮಾತನಡಲು ಹಿಂಜರಿಯಬೇಡಿ. ಕನ್ನಡ ಭಾಷೆಯ ಬಗ್ಗೆ ನಿರಭಿಮಾನ ತೋರಿಸಬೇಡಿ. ಕನ್ನಡ ತಿಳಿಯದವರಿಗೆ ಕನ್ನಡ ಕಲಿಯಲು ಸಹಕರಿಸಿ, ಪ್ರೋತ್ಸಾಹಿಸಿ. ನಿಮ್ಮ ಕೈಲಾದರೆ ಅವರಿಗೆ ಮಾತನಾಡಲು ಕಲಿಸಿ. ಕಲಿತವರು ಕನ್ನಡ ಮಾತನಾಡುವುದನ್ನು ಕಂಡು ಆನಂದಿಸಿ. ಕನ್ನಡ ನಾಡು ನುಡಿಯ ಐತಿಹಾಸಿಕ ಪ್ರಾಮುಖ್ಯತೆಯನ್ನು ನೀವೂ ಅರಿತು, ಗೌರವಿಸುತ ಅವರಿಗೂ ತಿಳಿಸಿ. ನಮ್ಮ ಕರುನಾಡಿನಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರು ಕನ್ನಡದಲ್ಲಿ ಮಾತನಾಡುವಂತೆ ಮಾಡಲು ಪಣವನ್ನು ತೊಡೊಣ. ಸಂಘಟಿತ ಸಂಚಲನದಿಂದ ಏನನ್ನಾದರೂ ಸಾಧಿಸಬಹುದೆಂದು ಸಾಭೀತುಪಡಿಸೊಣ. ಕನ್ನಡ ಭಾಷೆಯ ಬೆಳವಣಿಗೆಯೇ ಕನ್ನಡ ನಾಡಿನ ಬೆಳವಣಿಗೆ. ಕನ್ನಡ ನಾಡಿನ ಬೆಳವಣಿಗೆಯಲ್ಲೇ ನಮ್ಮೆಲ್ಲಾ ಕನ್ನಡಿಗರ ಏಳಿಗೆ. ಕನ್ನಡ ನಾಡಿನ ಅಭಿವೃದ್ದಿ ನಮ್ಮೆಲ್ಲರ ಹೊಣೆ. ಹುಡುಕಲು ಪ್ರಯತ್ನಿಸೋಣ ಕನ್ನಡ ಭಾಷೆಯನು ಪೋಷಿಸುವ ಹೊಸ ಬಗೆ. ಉರಿಯಲಿ ಪ್ರತೀಯೊಬ್ಬ ಕನ್ನಡಿಗನ ಎದೆಯಲ್ಲಿ ಕನ್ನಡತನವನು ಸಾರುವ ದಗೆ. ಇದನು ಸಾಧಿಸಿದರೆ ನಮ್ಮ ಕನ್ನಡ ಮಾತೆಗೆ ಮಾಡಿದಂತಾಗುವುದು ಒಂದು ಸಣ್ಣ ಸೇವೆ. ಮೂಡಿಸಬಹುದ ಆಕೆಯ ಸುಂದರ ಮೊಗದಲ್ಲೊಂದು ಮಂದಹಾಸದ ನಗೆ.